ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

        ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಅನೇಕ ಪ್ರಮುಖ ಮೈಲಿಗಲ್ಲುಗಳಾಗಿವೆ. 1902 ರಲ್ಲಿ ಕಾವೇರಿ ನದಿ ತೀರದ ಶಿವನಸಮುದ್ರಂನಲ್ಲಿ ಏಷ್ಯಾದ ಮೊದಲ ಹೈಡ್ರೊ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಅನ್ನು ಸ್ಥಾಪಿಸಲಾಯಿತು. ಬೆಂಗಳೂರು ನಗರ ಬೆಳಕಿನ ಯೋಜನೆ ಪೂರ್ಣಗೊಂಡಾಗಕರ್ನಾಟಕವು ಆಲ್ಟರ್ನೇಟಿಂಗ್ ವಿದ್ಯುತ್ ಪ್ರಾರಂಭಿಸಿತು. ಕರ್ನಾಟಕವು 1902 ರಲ್ಲಿ ಶಿವನಸಮುದ್ರಂನಿಂದ ಕೆ.ಜಿ.ಎಫ್ ವರೆಗೆ, ವಿಶ್ವದ ಅತಿ ಉದ್ದದ 147 ಕಿ.ಮೀ. ಪ್ರಸರಣ ಮಾರ್ಗವನ್ನು ಸ್ಥಾಪಿಸಲಾಯಿತು. ಕೆಪಿಸಿಎಲ್ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಕಾರ್ಪೊರೇಶನ್ ದೇಶದ ಮೊದಲ ರಾಜ್ಯವಾಗಿದೆ. ಅದು ಕೆಪಿಸಿಎಲ್ ಪ್ರಾರಂಭಿಸಿ ನಿರ್ಮಿಸಿದ ಆಸ್ತಿಯಾಗಿದೆ.

ನಾಲ್ಕು ದಶಕಗಳಿಂದ, ಕರ್ನಾಟಕ ವಿದ್ಯುತ್ ನಿಗಮವು ರಾಜ್ಯದ ಪ್ರಮುಖ ವಿದ್ಯುತ್ ಕ್ಷೇತ್ರದ ಸುಧಾರಣೆಗಳ ಹಿಂದೆ ಒಂದು ಪ್ರಮುಖ ಬೆಳವಣಿಗೆ ವೇಗವರ್ಧಕವಾಗಿದೆ – ಕೈಗಾರಿಕಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸ್ಥಿರ ಬೆಳವಣಿಗೆಯನ್ನು ಹೆಚ್ಚಿಸಿದ ಕ್ರಮಗಳು ಸಾಕ್ಷಿಯಾಗಿ, ಕೆಪಿಸಿಎಲ್ ಪ್ರಾರಂಭವಾದ 1970 ರ ವರ್ಷದಿಂದಲೇ, ಬೆಳೆಯುತ್ತಿರುವ ಉದ್ಯಮದ ಅಗತ್ಯಗಳನ್ನು  ಪೂರೈಸುವ ಮತ್ತು ಸಾಮಾನ್ಯ ವ್ಯಕ್ತಿಯ ಜೀವನವನ್ನು ಅನೇಕ ರೀತಿಯಲ್ಲಿ ಸ್ಪರ್ಶಿಸಲು " ಆಂತರಿಕ ಬೆಳವಣಿಗೆ" ಕುರಿತು ತನ್ನ ದೃಷ್ಟಿ ನೆಟ್ಟಿದೆ.

 

ಕೆಪಿಸಿಎಲ್ 1970 ರಲ್ಲಿ ಪ್ರಾರಂಭವಾದಾಗಿನಿಂದ ಆರಂಭಿಕ ಸ್ಥಾಪಿತ ಸಾಮಥ್ರ್ಯ 746 ಮೆಗಾವ್ಯಾಟ್‍ನೊಂದಿಗೆ 8738.305 ಮೆಗಾವ್ಯಾಟ್‍ಗೆ ಸ್ಥಿರವಾಗಿ ಬೆಳೆದಿದೆ. ಪ್ರಸ್ತುತ ಸ್ಥಾಪನೆಯು 5020 ಮೆಗವ್ಯಾಟ್ ಥರ್ಮಲ್ ಪವರ್, 3679.75 ಮೆಗವ್ಯಾಟ್ ಹೈಡ್ರೊ ಪವರ್, 4.555 ಮೆಗವ್ಯಾಟ್ ವಿಂಡ್ ಪವರ್ ಮತ್ತು 34 ಮೆಗಾವ್ಯಾಟ್ ಸೌರಶಕ್ತಿಯನ್ನು ಒಳಗೊಂಡಿದೆ, 370 ಮೆಗಾವ್ಯಾಟ್ ಸಂಯೋಜಿತ ಸೈಕಲ್‍ಪವರ್ ಕಮಿಷನಿಂಗ್ ಅಂಚಿನಲ್ಲಿದೆ. ಈ ಕೆಲವು ವಿದ್ಯುತ್ ಸ್ಥಾವರಗಳನ್ನು ಹಲವಾರು ವರ್ಷಗಳ ಹಿಂದೆಯೇ ಕಾರ್ಯರೂಪಕ್ಕೆ ತರಲಾಯಿತು ಮತ್ತು ಈ ಘಟಕಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು, ಕೆಲವು ಘಟಕಗಳಿಗೆ ಆರ್ & ಎಂ ಚಟುವಟಿಕೆಗಳನ್ನು ನಡೆಸಲಾಯಿತು ಅವುಗಳ ವಯಸ್ಸಾದ ಮತ್ತು ಕಾರ್ಯಚರಣೆಯ ಸಮಯದ ಆಧಾರದ ಮೇಲೆ ಉಳಿದ ಘಟಕಳಿಗೆ ಕೈಗೊಳ್ಳಬೇಕಾಗಿದೆ.

 

ಉದ್ಯಮ ದೃಷ್ಟಿಯಿಂದ, ಕೆಪಿಸಿಎಲ್ ಗುಣಮಟ್ಟವನ್ನು ಹೆಚ್ಚಿಸಿದೆ ಮತ್ತು ಪ್ರತಿ ಮೆವ್ಯಾ ವೆಚ್ಚವನ್ನು ಕಡಿಮೆ ಮಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ಒಂದು ಮಾನದಂಡವಾಗಿ ಮಾರ್ಪಟ್ಟಿದೆ. ಉದ್ಯಮದಲ್ಲಿ ಸುಸ್ಥಾಪಿತ ಮೂಲಸೌಕರ್ಯ ಮತ್ತು ಆಧುನಿಕ, ಪ್ರಗತಿಶೀಲ ನಿರ್ವಹಣಾ ಪರಿಕಲ್ಪನೆಗಳು ಮತ್ತು ಉತ್ಕೃಷ್ಟತೆಗೆ ಬದ್ಧತೆ, ಇದು ಕರ್ನಾಟಕದ ಏರುತ್ತಿರುವ ಶಕ್ತಿಯ ಬೇಡಿಕೆಯ ಸವಾಲುಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

 

ಕೆಪಿಸಿಎಲ್ ಸಂಪನ್ಮೂಲ ನಿರ್ವಹಣೆ ಸಾಮರ್ಥ್ಯಗಳು – ಯೋಜನಾ, ಹಣಕಾಸು, ಕಾರ್ಯಾಚರಣೆ ಮತ್ತು ಕಾರ್ಯಗತಗೊಳಿಸುವ ವಿಷಯದಲ್ಲಿ ಕೆಪಿಸಿಎಲ್ ಸಹ ಹೆಚ್ಚಿನ ರೇಟಿಂಗ್ ಹೊಂದಿದೆ.

 

 

 

 

 

ಇತ್ತೀಚಿನ ನವೀಕರಣ​ : 24-08-2022 04:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080