ಅಭಿಪ್ರಾಯ / ಸಲಹೆಗಳು

ಮಾಹಿತಿ ತಂತ್ರಜ್ಞಾನ 

ನಿಗಮವು ತನ್ನ ವ್ಯವಹಾರಿಕ ಬದ್ಧತೆಯನ್ನು ನಿರ್ವಹಿಸಲು ಅನೇಕ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳನ್ನು ಅಳವಡಿಸಿಕೊಂಡಿದೆ. ಅವುಗಳಲ್ಲಿ ಕೆಲವು ಐ.ಟಿ. ವ್ಯವಸ್ಥೆಗಳು ಈ ಕೆಳಕಂಡಂತಿವೆ.

೧) ಯಂತ್ರಾಂಶಗಳು: ಕೆಪಿಸಿಎಲ್ ವಿಶ್ವಾಸಾರ್ಹ ಮತ್ತು ಅತ್ಯಾಧುನಿಕ ಒಡಿಎ (ಒರಾಕಲ್ ಡೇಟಾಬೇಸ್ ಅಪ್ಲೈಯನ್ಸ್ ) ಸರ್ವರ್ ಉಪಯೋಗಿಸಿಕೊಳ್ಳುತ್ತಿದೆ, ಇದು ಹೆಚ್ಚಿನ ಲಭ್ಯತೆ ಮತ್ತು ಡೇಟಾ ಸುರಕ್ಷತೆಯ ಸಾಮರ್ಥ್ಯವನ್ನು ಹೊಂದಿದೆ. ಕೆಪಿಸಿಎಲ್ ಕಂಪ್ಯೂಟರ್ ತಂತ್ರಜ್ಞಾನವನ್ನು ಸಮಯಕ್ಕೆ ತಕ್ಕಂತೆ ನವೀಕರಿಸಿಕೊಂಡಿದೆ.

೨) ಸಂಪರ್ಕತೆ: ಲೋಕಲ್ ಏರಿಯಾ ನೆಟ್‌ವರ್ಕ್ ವಿವಿಧ ಯೋಜನಾ ಪ್ರದೇಶಗಳ ಎಲ್ಲಾ ಕಛೇರಿಗಳಲ್ಲಿ ಹಾಗೂ ವಿದ್ಯುದಾಗರಗಳಲ್ಲಿ ಅಳವಡಿಸಲಾಗಿದೆ ಮತ್ತು ಅವುಗಳನ್ನು ಓ.ಎಫ್.ಸಿ ಮುಖಾಂತರ ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರು ಮತ್ತು ಎಲ್ಲಾ ಯೋಜನಾ ಪ್ರದೇಶಗಳಿಗೆ ವೈಡ್ ಏರಿಯಾ ನೆಟ್‌ವರ್ಕ್  ಕೇಸ್ವ್ಯಾನ್ (ಕರ್ನಾಟಕ ರಾಜ್ಯದ ವಿಶಾಲ ಪ್ರದೇಶದ ಜಾಲಬಂಧ) ಮುಖಾಂತರ ಕಲ್ಪಿಸಲಾಗಿದೆ. ನಿಗಮದ ಎಲ್ಲಾ ಕಛೇರಿಗಳಿಗೆ ಲೋಕಲ್ ಏರಿಯಾ ನೆಟ್‌ವರ್ಕ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಜಿಓಕೆ ಇ-ಮೇಲ್ ಐಡಿ ಮತ್ತು ಇಂಟರ್‌ನೆಟ್ ಸೌಲಭ್ಯವನ್ನು ಕಾರ್ಯನಿರ್ವಾಹಕ ಅಭಿಯಂತರರ ಹಂತದವರೆಗೆ ಹಾಗೂ ಅಗತ್ಯತೆಯುಳ್ಳ ಉದ್ಯೋಗಿಗಳಿಗೆ ಒದಗಿಸಲಾಗಿದೆ. ವರ್ಚುವಲ್ ಸಭೆಗಳನ್ನು ವಿಡಿಯೋ ಕಾನ್‌ಫೆರೆನ್ಸ ಮೂಲಕ ಎಲ್ಲಾ ಯೋಜನಾ ಪ್ರದೇಶಗಳಿಗೆ/ಸಾಮಗ್ರಿ ಪೂರೈಕೆದಾರರು/ಗುತ್ತಿಗೆದಾರರು/ಸರ್ಕಾರಿ ಕಛೇರಿಗಳಿಗೆ ನಡೆಸಲಾಗುತ್ತಿದೆ.

೩) ಉದ್ಯಮ ಸಂಪನ್ಮೂಲ ಯೋಜನೆ [ಇಆರ್‌ಪಿ]: ವಿವಿಧ ಕ್ರಿಯಾತ್ಮಕ ಪ್ರದೇಶಗಳನ್ನು ಸ್ವಯಂಚಾಲಿತಗೊಳಿಸಲು ಹಂತ ಹಂತವಾಗಿ, ಆಂತರಿಕ ತಂಡದಿಂದ ಇ.ಆರ್.ಪಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಮತ್ತು ಅನುಷ್ಠಾನಗೊಳಿಸಿದೆ. ಅವುಗಳನ್ನು ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ಸಂಬಳ ಭವಿಷ್ಯ ನಿಧಿ ಮತ್ತು ಪಿಂಚಣಿ, ಮಾನವ ಸಂಪನ್ಮೂಲ, ಇಂಧನ ನಿರ್ವಹಣೆ, ಖರೀದಿ ಮತ್ತು ದಾಸ್ತಾನು ನಿರ್ವಹಣೆ, ಕಾಮಗಾರಿ ಮತ್ತು ನಿರ್ವಹಣೆ, ವಿದ್ಯುತ್ ಉತ್ಪಾದನಾ ನಿರ್ವಹಣೆಯಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಕೆಳಕಂಡ ಅಪ್ಲಿಕೇಷನ್ ತಂತ್ರಾಂಶಗಳನ್ನು ನಿಗಮದ ಸಿಸ್ಟಮ್ಸ್ ಅಭಿಯಂತರರ ತಂಡವು ಅಭಿವೃದ್ಧಿ ಪಡಿಸಿ ಅಳವಡಿಸಲಾಗಿದೆ.

 •  ಇಂಟಿಗ್ರೇಟೆಡ್ ಇನ್ವೆಂಟರಿ ಮ್ಯಾನೇಜ್ಮೆಂಟ್ ವ್ಯವಸ್ಥೆ

 •  ಮಾನವ ಸಂಪನ್ಮೂಲ ಮಾಹಿತಿ ವ್ಯವಸ್ಥೆ

 •  ವರ್ಕ್ಸ್ ಇನ್ಫರ್‌ಮೇಶನ್ ಮಾಹಿತಿ ವ್ಯವಸ್ಥೆ

 • ವರ್ಕ್ಸ್ ಇನ್ಫರ್‌ಮೇಶನ್ ಮಾಹಿತಿ ವ್ಯವಸ್ಥೆ

 • ಜನರೇಶನ್ ಮಾಹಿತಿ ವ್ಯವಸ್ಥೆ

 •  ಫ್ಯುಯಲ್ ಮಾಹಿತಿ ವ್ಯವಸ್ಥೆ

 •  ಫೈನಾನ್ಸ್ ಮತ್ತು ಅಕೌಂಟ್ಸ್

 • ಹಾರು ಬೂದಿ ನಿರ್ವಹಣೆ (ಹೊರ ಗುತ್ತಿಗೆ)

 • ಅಸೆಟ್, ಡಿಫೆಕ್ಟ ಮತ್ತು ಅಟೆಂಡೆನ್ಸ್ ನಿರ್ವಹಣೆ - ಮೊಬೈಲ್ ಆಪ್ (ಹೊರ ಗುತ್ತಿಗೆ)೪) ವೆಬ್‌ಸೈಟ್: ಹೊಸ ವೆಬ್‌ಸೈಟ್ ದ್ವಿಭಾಷೆಗಳಲ್ಲಿ (ಇಂಗ್ಲೀಷ್ ಮತ್ತು ಕನ್ನಡ) (https://kpcl.karnataka.gov.in) ಹಾಗೂ GIGW ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳಂತೆ ಮರುವಿನ್ಯಾಸಗೊಳಿಸಲಾಗಿದೆ.

೫) ಇತರೆ ಸಾಫ್ಟವೇರ್‌ಗಳು: ಇತ್ತೀಚಿನ ಮಾದರಿಯ ಆಟೋಕ್ಯಾಡ್ ಮತ್ತು ಸ್ಟ್ಯಾಡ್, ಅಡೋಬ್ ಮತ್ತು ಇ-ಟ್ಯಾಬ್ ಸಾಫ್ಟವೇರ್‌ಗಳನ್ನು ಡಿಸೈನ್ ಕಛೇರಿಗಳಲ್ಲಿ ವಿಸ್ತçತವಾಗಿ ಬಳಸಲಾಗುತ್ತಿದೆ. ಓರೆಕಲ್ ೧೯ಅ ಡೆಟಾಬೇಸ್, ಓರೆಕಲ್ ೧೨ಅ ಅಪ್ಲಿಕೇಶನ್ ಸರ್ವರ್ ಓರೆಕಲ್ ವೆಬ್ ಸೂಟ್ ರಿಪೋರ್ಟ್್ಸ ಬಳಕೆ ಮಾಡಲಾಗುತ್ತಿದೆ.

೬) ಇ-ಖರೀದಿ: ಪಾರದರ್ಶಕ ಕಾಯ್ದೆ ಪ್ರಕಾರ ಕರ್ನಾಟಕ ಇ-ಪ್ರೊಕ್ಯೂರ್ಮೆಂಟ್, ಜಿಓಕೆ ಮತ್ತು ಜಿಓಐ ಜೆಮ್ ಪೋರ್ಟಲ್ ಮೂಲಕ ಕಾರ್ಪೊರೇಟ್ ಕಛೇರಿ ಹಾಗೂ ಯೋಜನಾ ಪ್ರದೇಶಗಳಲ್ಲಿ ಗೂಡ್ಸ್ ಮತ್ತು ಸೇವೆಯ ಟೆಂಡರ್‌ಗಳನ್ನು ಕೆ.ಟಿ.ಪಿ.ಪಿ ಕಾಯಿದೆಯನ್ವಯ ಉಪಯೋಗಿಸಲಾಗುತ್ತಿದೆ.

೭) ಇಆರ್‌ಪಿ ಸಲಹೆ: ಕರ್ನಾಟಕ ವಿದ್ಯುತ್ ನಿಗಮವು MEILಗೆ ಇಆರ್‌ಪಿ ತಂತ್ರಾಂಶದ ಅಭಿವೃದ್ಧಿ ಹಾಗೂ ಅನುಷ್ಠಾನಕ್ಕೆ ಸಲಹೆ ನೀಡಲಾಗುತ್ತಿದೆ.

 

 

 

 

 

 

 

ಇತ್ತೀಚಿನ ನವೀಕರಣ​ : 02-08-2022 05:54 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080